ನಟ ದರ್ಶನ್ ಮತ್ತು ಸೃಜನ್ ಇಬ್ಬರು ಕನ್ನಡ ಚಿತ್ರರಂಗದ ಕುಚುಕು ಗೆಳೆಯರು. ಖಳನಾಯಕರ ಮಕ್ಕಳಾಗಿ ನಾಯಕನ ಪಟ್ಟಕ್ಕೆ ಏರಿ ಇಂದು ಸ್ಯಾಂಡಲ್ ವುಡ್ ಸ್ಟಾರ್ ಗಳಾಗಿ ಈ ಇಬ್ಬರು ನಟರು ಮಿಂಚುತ್ತಿದ್ದಾರೆ. ಗಜ ಮತ್ತು ಸೃಜ ಇಬ್ಬರ ಸ್ನೇಹ ಎಷ್ಟು ನಿರ್ಮಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿನ್ನೆ ಹಿರಿಯ ನಟಿ ಹಾಗೂ ಸೃಜನ್ ಲೋಕೇಶ್ ತಾಯಿ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬ ಇತ್ತು. ಈ ವೇಳೆ ದರ್ಶನ್ ತಾವೇ ಖುದ್ದಾಗಿ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ದರ್ಶನ್ ಮತ್ತು ಸೃಜನ್ ಜೊತೆಗೆ ಅವರ ಆಪ್ತ ಸ್ನೇಹಿತರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ದರ್ಶನ್ ಆಚರಣೆ ಮಾಡಿರುವ ಫೋಟೋವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತೂಗುದೀಪ ಮತ್ತು ಲೋಕೇಶ್ ಕುಟುಂಬದ ಅನುಬಂಧ ಹೀಗೆ ಇರಲಿ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ. <br /> <br /> <br /> Actor Darshan and Srujan Lokesh are very well known in the industry for their long lasting friendship . This time Darshan did something special for his dear friend